Ishwarachandra B G
-

Weekly wrap: ಸೌದಿಯಲ್ಲಿ ಮೋದಿ ಚಿನ್ನದ ಪ್ರತಿಮೆ, ಭಾರತಕ್ಕೆ ಪ್ರಯಾಣ ವೇಳೆ ಎಚ್ಚರಿಕೆಗೆ ಕೆನಡಾ ಸೂಚನೆ ವಾರದ ಕ್ಲೇಮ್ ನೋಟ
ಸೌದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆ ತಯಾರು ಮಾಡಲಾಗಿದೆ, ಖಲಿಸ್ತಾನ ವಿವಾದ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಹಗ್ಗಜಗ್ಗಾಟ ಭಾರತ-ಕೆನಡಾ ಮಧ್ಯೆ ನಡೆದಿರುವಂತೆಯೇ, ಭಾರತಕ್ಕೆ ಪ್ರಯಾಣಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಕೆನಡಾ ಸೂಚನೆ, ಮುಳುಗಿ ಮೃತನಾದ ವ್ಯಕ್ತಿಯನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಜೀವಂತವಾಗುತ್ತಾನೆ, ತೆಲಂಗಾಣ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆ, ಗರ್ಭಿಣಿಯರು ಪ್ರತಿ ದಿನ ಬಾದಾಮಿ ತಿಂದರೆ, ಹುಟ್ಟುವ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು ಸತ್ಯಾಸತ್ಯತೆಯನ್ನು ತೆರೆದಿಟ್ಟಿದೆ. ಭಾರತಕ್ಕೆ…
-

Fact Check: ಕೆನಡಾದಲ್ಲಿ ಆರೆಸ್ಸೆಸ್ ನಿಷೇಧ? ವೈರಲ್ ಹೇಳಿಕೆ ಸತ್ಯವೇ?
Claimಕೆನಡಾದಲ್ಲಿ ಆರೆಸ್ಸೆಸ್ ನಿಷೇಧ Factಕೆನಡಾದಲ್ಲಿ ಆರೆಸ್ಸೆಸ್ ನಿಷೇಧವಾಗಿಲ್ಲ. ಕೆನಡಾ ಸರ್ಕಾರ ಅಂತಹ ಯಾವುದೇ ಆದೇಶ ನೀಡಿಲ್ಲ ಇತ್ತೀಚಿನ ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ, ಒಂದು ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. “ಕೆನಡಾ ಸರ್ಕಾರವು ಹಿಂದೂ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರೆಸ್ಸೆಸ್ಸ್) ನಿಷೇಧಿಸಿದೆ ಮತ್ತು ಅದರ ಕಾರ್ಯಕರ್ತರನ್ನು ತಕ್ಷಣವೇ ದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ” ಎಂದು ವೈರಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆನಡಾದಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸುವುದು ಸೇರಿದಂತೆ ಇತರ ಮೂರು ಬೇಡಿಕೆಗಳನ್ನು ವ್ಯಕ್ತಿಯೊಬ್ಬರು ಮುಂದಿಟ್ಟಿರುವ ವೀಡಿಯೋದೊಂದಿಗೆ…
-

Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?
Claim ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಉದ್ಘಾಟಿಸಿದ್ದಾರೆ. ಹಿಂದೂಗಳ ಮೂರ್ಖರಾದ ಪರಿಣಾಮ ಇದು ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ. ಫೇಸ್ಬುಕ್ನಲ್ಲಿ ಕಂಡುಬಂದ ಈ ಕ್ಲೇಮ್ನಲ್ಲಿ “ತೆಲಂಗಾಣ ವಿಧಾನಸೌಧದಲ್ಲಿ ನಿರ್ಮಿಸಲಾಗಿರುವ ನೂತನ ಬೃಹತ್ ಮಸೀದಿಯನ್ನು ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಇತ್ತೀಚೆಗೆ ಉದ್ಘಾಟಿಸಿದರು. ನೋಡಿ ಹಿಂದುಗಳೇ ಮೂರ್ಖರಾಗಿ ಮತ ಚಲಾಯಿಸಿದ ಪರಿಣಾಮವಿದು. ವಿವೇಚನೆ ಇಲ್ಲದೆ ಮತ ನೀಡಿದರೆ ಮುಂದೊಂದು ದಿನ ನಿಲ್ಲಲು ನೆಲೆ ಇಲ್ಲದಂತಾದೀತು.” ಎಂದು ಹೇಳಲಾಗಿದೆ. Also…
-

Weekly wrap: ಡ್ರಗ್ಸ್ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ವಾರದ ಕ್ಲೇಮ್ ನೋಟ
ಡ್ರಗ್ಸ್ ಸೇವಿಸಿದ ಯುವತಿಯ ಆಕ್ರಮಣಕಾರಿ ವರ್ತನೆ, ಮೆಡಿಕಲ್ ಕಾಲೇಜಿನಲ್ಲಿ ಚಲಿಸಿದ ಏಣಿ, ಬೆಂಗಳೂರಲ್ಲಿ ಮಳೆನೀರಲ್ಲಿ ಜಾರಿದ ವಿಮಾನ, ಕಲ್ಲುಸಕ್ಕರೆ-ಕಾಮಕಸ್ತೂರಿ ಸೇರಿಸಿ ಕುಡಿದರೆ ಪೈಲ್ಸ್ ಗುಣಮುಖ ಎಂಬ ಕ್ಲೇಮ್ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ನ್ಯೂಸ್ಚೆಕರ್ ಇವುಗಳ ಸತ್ಯಶೋಧನೆ ನಡೆಸಿದ್ದು ಇವುಗಳು ಸುಳ್ಳು ಎಂದು ಕಂಡುಬಂದಿದೆ. ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು? ಮಂಗಳೂರಿನಲ್ಲಿ ಡ್ರಗ್ಸ್ ಸೇವಿಸಿದ್ದಾಳೆ ಎನ್ನಲಾದ ಯುವತಿಯೊಬ್ಬಳು ಪೊಲೀಸರೊಂದಿಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಸತ್ಯಶೋಧನೆ ವೇಳೆ…
-

ಸ್ವಾವಲಂಬಿ ಸಾರಥಿ ಯೋಜನೆ ವಿವಾದ; ನಿಜಾಂಶ ಏನು?
ಸ್ವಾವಲಂಬಿ ಸಾರಥಿ ಯೋಜನೆ ಕುರಿತ ವಿವಾದವೊಂದು ಈಗ ಭುಗಿಲೆದ್ದಿದೆ. ಕರ್ನಾಟದಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಅನ್ವಯ, ಅವರಿಗೆ ಮಾತ್ರ ಸೀಮಿತವಾಗುವಂತೆ ವಾಹನಗಳನ್ನು ತೆಗೆಯಲು ಅನುಕೂಲ ಮಾಡಿಕೊಡುವ ಸಬ್ಸಿಡಿ ಯೋಜನೆಯೊಂದನ್ನು ಹೊರತಂದಿದೆ ಎಂಬುದು ಈ ಆರೋಪ. ಈ ಕುರಿತು ಆಜ್ತಕ್ ಟಿವಿ ವಾಹನಿಯಲ್ಲಿ ಆಂಕರ್ ಸುಧೀರ್ ಚೌಧರಿ ಅಭಿಪ್ರಾಯವನ್ನು ಹೇಳಿದ್ದು, ಈ ಕುರಿತು ಅವರ ಮತ್ತು ವಾಹಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೊತೆಗೆ ಯೋಜನೆ ಕುರಿತು ಸಾಮಾಜಿಕ…