Ishwarachandra B G
-

ಮತ ಕೇಳಲು ಹೋದ ಸಿಎಂ ಬೊಮ್ಮಾಯಿಗೆ ಥಳಿತ, ಪ್ರಚಾರದ ವೇಳೆ ಡಿಕೆಶಿ ತೂರಾಟ: ಈ ವಾರದ ಸುಳ್ಳು ಕ್ಲೇಮ್ಗಳ ಕುರಿತ ನೋಟ
ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೇರಿದಂತೆ, ಮತ ಕೇಳಲು ಹೋದ ಸಿಎಂ ಬೊಮ್ಮಾಯಿಗೆ ಥಳಿತ, ಪ್ರಚಾರದ ವೇಳೆ ಡಿಕೆಶಿ ತೂರಾಟ ಎನ್ನುವಂತಹ ಕ್ಲೇಮುಗಳು ಸೇರಿದಂತೆ ವಿವಿಧ ಸುಳ್ಳು ಕ್ಲೇಮುಗಳು ವ್ಯಾಪಕವಾಗಿ ಹರಿದಾಡಿದ್ದವು. ಮತದಾನಕ್ಕೆ ಮೊದಲು ಮತ ಕೇಳಲು ಹೋಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೇ ಥಳಿಸಲಾಗಿತ್ತು ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪ್ರಮುಖ ಸುದ್ದಿಯಾಗಿದೆ. ಇದರೊಂದಿಗೆ ಬಿಜೆಪಿ ಮುಖಂಡನ ಕಾರಿನಲ್ಲೇ ಮತಯಂತ್ರ ಸಿಕ್ಕಿದ್ದು, ಅದನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ ಎಂದು ಹೇಳಲಾಗಿತ್ತು. ಉಳಿದಂತೆ ಕಾಂಗ್ರೆಸ್ಗೆ ಮತ ಹಾಕಬೇಡಿ…
-

Fact Check: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ಗೆ ಓಟು ಹಾಕಲು ಪಾಕ್ ಪ್ರಧಾನಿ ಮನವಿ, ಟ್ವೀಟ್ ಸತ್ಯವೇ?
Claim ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆದಿದ್ದು, ಇದಕ್ಕೆ ಮುಂಚಿತವಾಗಿ ಮತವನ್ನು ಕಾಂಗ್ರೆಸ್ಗೆ ಹಾಕುವಂತೆ ಪಾಕಿಸ್ಥಾನ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ ಎಂದು ಆರೋಪಿಸಲಾದ ಟ್ವೀಟ್ ಒಂದು ವೈರಲ್ ಆಗಿದೆ. ಈ ಕುರಿತ ಕ್ಲೇಮ್ ಫೇಸ್ಬುಕ್ನಲ್ಲಿ ಕಂಡುಬಂದಿದ್ದು, ಅದು ಹೀಗಿದೆ “2047 ರೊಳಗೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡಬೇಕು. ಅದಕ್ಕಾಗಿ ನಿಷೇಧವಾಗಿರುವ PFI ಸಂಘಟನೆಯ ಮರು ಸ್ಥಾಪಿಸಬೇಕು. ಕಾಂಗ್ರೆಸ್ ಮಾತ್ರ PFI ಸಂಘಟನೆ ಮೇಲಿರುವ ನಿಷೇಧವನ್ನ ವಾಪಸ್ ಪಡೆಯುತ್ತದೆ. ಹಾಗಾಗಿ ಎಲ್ಲಾರೂ ಕಾಂಗ್ರೆಸ್ ಗೆ…