Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Fact
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್ನಿಂದ ವಂಚನೆ
Claim
ಈ ವೈರಲ್ ವೀಡಿಯೋ 2022ರ ಪಶ್ಚಿಮ ಬಂಗಾಳ ಸ್ಥಳೀಯಾಡಳಿತ ಚುನಾವಣೆ ಸಂದರ್ಭದ್ದಾಗಿದ್ದು, ಟಿಎಂಸಿ ಚುನಾವಣಾ ಏಜೆಂಟ್ ಬೇರೆಯವರ ಹೆಸರಲ್ಲಿ ಮತದಾನ ನಡೆಸಿದ್ದಾಗಿ ಆರೋಪಿಸಲಾಗಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಂಚನೆ ಮಾಡಿದೆ ಎಂದು ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೀಡಿಯೋ ಒಂದು ಹರಿದಾಡಿದೆ.
ಫೇಸ್ಬುಕ್ನಲ್ಲಿ ಈ ಕುರಿತ ಕ್ಲೇಮ್ ಕಂಡುಬಂದಿದ್ದು, “ಕರ್ನಾಟಕದಲ್ಲಿ ಮತದಾನದಲ್ಲಿ ಕಾಂಗ್ರೆಸ್ ವಂಚನೆ ಮಾಡಿದೆ. *(ಒಬ್ಬನೇ ಬೇರೆ ಬೇರೆ ಮಂದಿಗಳ ಹೆಸರಿನಲ್ಲಿ ಪುನಃ ಪುನಃ ಗುಂಡಿ ಒತ್ತಿ ಬಹಳ ಮತ ಗಿಟ್ಟಿಸಿದ ವಿಧಾನ” ಎಂದು ಹೇಳಲಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬ ಮತದಾರರ ಪರವಾಗಿ ತಾನೇ ಮತಯಂತ್ರದ ಗುಂಡಿಯನ್ನು ಒತ್ತುತ್ತಿರುವ ದೃಶ್ಯವಿದೆ.

ಇದೇ ರೀತಿಯ ಇನ್ನೊಂದು ಕ್ಲೇಮ್ ಇನ್ಸ್ಟಾಗ್ರಾಂನಲ್ಲಿ ಕಂಡುಬಂದಿದೆ.

ಈ ಕುರಿತು ಸತ್ಯಶೋಧನೆಯನ್ನು ನ್ಯೂಸ್ಚೆಕರ್ ನಡೆಸಿದ್ದು ಇದೊಂದು ಸುಳ್ಳು ಕ್ಲೇಮ್ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ವೈರಲ್ ವೀಡಿಯೋದ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದೆ. ಈ ವೇಳೆ ಇದು ಪಶ್ಚಿಮ ಬಂಗಾಳದಲ್ಲಿ 2022 ಫೆಬ್ರವರಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆದ ಸಂದರ್ಭದ್ದು ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್ ಸರ್ಚ್ ವೇಳೆ ಟಿವಿ 9 ಬಾಂಗ್ಲಾ ಫೆಬ್ರವರಿ 27, 2022ರಂದು ಅಪ್ಲೋಡ್ ಮಾಡಿದ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಇದರ ಶೀರ್ಷಿಕೆಯಲ್ಲಿ “ಸೌತ್ ಡಮ್ಡಮ್ ಪುರಸಭೆಯ ವಾರ್ಡ್ ನಂಬರ್ 33ಕ್ಕೆ ಲೇಕ್ ವ್ಯೂ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಏಜೆಂಟರೇ ಮತದಾರರನ್ನು ತಡೆದು ಇವಿಎಂ ಬಟನ್ ಒತ್ತಿದರು ಈ ವಿಡಿಯೋ ನೋಡಿ(ಅನುವಾದಿತ)” ಎಂದು ಹೇಳಲಾಗಿದೆ.
ಈ ವೈರಲ್ ವೀಡಿಯೋ ಕ್ಲೇಮಿನಲ್ಲಿ ಹೇಳಲಾದ ವೀಡಿಯೋವನ್ನು ಹೋಲುತ್ತಿರುವುದು ಕಂಡುಬಂದಿದೆ.
ಈ ವರದಿಯನ್ನು ಸಾಕ್ಷ್ಯವಾಗಿ ಪರಿಗಣಿಸಿ ಕೀವರ್ಡ್ ಸರ್ಚ್ ನಡೆಸಿದಾಗ, ಖಬರ್ 24X7 ಫೆಬ್ರವರಿ 27, 2022ರಂದು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. “27, 2022, “ವೀಡಿಯೊವು ಬೂತ್ ನಂ. 108, ವಾರ್ಡ್ ಸಂಖ್ಯೆ. 33, ಸೌತ್ ದಮ್ ಡಮ್ನಿಂದ ಬಂದಿದೆ. ಈ ವೀಡಿಯೋದಲ್ಲಿ ತೃಣಮೂಲ ಕಾರ್ಯಕರ್ತರು ಮತಗಟ್ಟೆಯನ್ನು ಆಕ್ರಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವೀಡಿಯೋವನ್ನು ಬಿಜೆಪಿ ಮುಖಂಡ ಅಗ್ನಿಮಿತ್ರ ಪಾಲ್ ಶೇರ್ ಮಾಡಿದ್ದಾರೆ” (ಅನುವಾದಿತ) ಎಂದು ವರದಿ ತಿಳಿಸಿದೆ.
Also Read: ಕಾಂಗ್ರೆಸ್ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 27, 2022ರಂದು ಬಿಜೆಪಿ ಬಂಗಾಳ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿದ್ದು ಮತದಾರರು ಮತದಾನಕ್ಕೆ ಹೋಗುವ ಮೊದಲೇ ಟಿಎಂಸಿ ಪಡೆಗಳು ಮತಯಂತ್ರದ ಬಟನ್ ಪ್ರೆಸ್ ಮಾಡುತ್ತಿವೆ. ಚುನಾವಣೆ ಹೆಸರಲ್ಲಿ ನಡೆಯುತ್ತಿರುವ ಪ್ರಹಸನ ನಿಲ್ಲಿಸಿ!, ಪ್ರಜಾಪ್ರಭುತ್ವಕ್ಕೆ ಇದು ನಾಚಿಕೆಗೇಡು, ಟಿಎಂಸಿ ಬೆಂಬಲಿಗರಿಂದ ಲೂಟಿ ಎಂದು ಬರೆಯಲಾಗಿದೆ. ಈ ಟ್ವೀಟ್ ಇಲ್ಲಿದೆ.
Also Read: ಕುಳಿತುಕೊಳ್ಳಲೂ ಸೋನಿಯಾ ಗಾಂಧಿ ಅನುಮತಿಗೆ ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದರೆ?
ಈ ಮೂಲಕ ಇದು ಇತ್ತೀಚಿನ ಕರ್ನಾಟಕ ಚುನಾವಣೆಯ ವೀಡಿಯೋ ಅಲ್ಲ ಎಂಬುದು ಖಚಿತವಾಗಿದೆ.
ಈ ಸತ್ಯಶೋಧನೆಯ ಪ್ರಕಾರ ಕ್ಲೇಮಿನಲ್ಲಿ ಹೇಳಿರುವ ವೈರಲ್ ವೀಡಿಯೋ ಪಶ್ಚಿಮ ಬಂಗಾಳದ್ದಾಗಿದ್ದು, ಕರ್ನಾಟಕ ಚುನಾವಣೆಯದ್ದಲ್ಲ ಎಂದು ತಿಳಿದುಬಂದಿದೆ.
Our Sources
YouTube video By TV9 Bangla, Dated: February 27, 2022
Report By Khabor 24X7, Dated February 27, 2022
Tweet By BJP Bengla, Dated: February 27, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Runjay Kumar
June 27, 2024
Kushel HM
June 14, 2024
Ishwarachandra B G
June 4, 2024